ಯರಝರಿ ile: 4Oo100in 9Aa Zz omo PCc Zzdn 7 Ii Rr8Gg

ಯರಝರಿ
India-locator-map-blank.svg
Red pog.svg
ಯರಝರಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ವಿಜಯಪುರ
ನಿರ್ದೇಶಾಂಕಗಳು 16.1833° N 75.7000° E
ವಿಸ್ತಾರ
 - ಎತ್ತರ
೧೨೦೦ km²
 - 770 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೨)
 - ಸಾಂದ್ರತೆ
೧೫೦೦
 - ೫೦/ಚದರ ಕಿ.ಮಿ.

ಯರಝರಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ.

ಪರಿವಿಡಿ

  • ಭೌಗೋಳಿಕ
  • ಹವಾಮಾನ
  • ಜನಸಂಖ್ಯೆ
  • ಸಾಂಸ್ಕೃತಿಕ
  • ಕಲೆ ಮತ್ತು ಸಂಸ್ಕೃತಿ
  • ಧರ್ಮಗಳು
  • ಭಾಷೆಗಳು
  • ದೇವಾಲಯಗಳು
  • ಮಸೀದಿಗಳು
  • ೧೦ ನೀರಾವರಿ
  • ೧೧ ಹಬ್ಬಗಳು
  • ೧೨ ನೀರಾವರಿ
  • ೧೩ ಕಾಲುವೆಗಳು
  • ೧೪ ಉದ್ಯೋಗ
  • ೧೫ ಬೆಳೆಗಳು
  • ೧೬ ಹಬ್ಬಗಳು
  • ೧೭ ಶಿಕ್ಷಣ
  • ೧೮ ಸಾಕ್ಷರತೆ
  • ೧೯ ಬ್ಯಾಂಕ್
  • ೨೦ ಅಂಚೆ ಕಚೇರಿ
  • ೨೧ ಗ್ರಾಮ ಪಂಚಾಯತ
  • ೨೨ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
  • ೨೩ ಹಾಲು ಉತ್ಪಾದಕ ಸಹಕಾರಿ ಸಂಘ
  • ೨೪ ಪಶು ಚಿಕಿತ್ಸಾಲಯ
  • ೨೫ ರಾಜಕೀಯ

ಭೌಗೋಳಿಕ[ಬದಲಾಯಿಸಿ]

ಯರಝರಿ ಗ್ರಾಮವು ಭೌಗೋಳಿಕವಾಗಿ 16°* 18' 31"N ಉತ್ತರ ಅಕ್ಷಾಂಶ ಮತ್ತು 76°* 4' 7"E ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ[ಬದಲಾಯಿಸಿ]

  • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ[ಬದಲಾಯಿಸಿ]

ಯರಝರಿ ಗ್ರಾಮದಲ್ಲಿ ಜನಸಂಖ್ಯೆ ಸುಮಾರು ೨,೫೦೦ ಇದೆ. ಅದರಲ್ಲಿ ೧೩೦೦ ಪುರುಷರು ಮತ್ತು ೧೨೦೦ ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ[ಬದಲಾಯಿಸಿ]

ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮಗಳು[ಬದಲಾಯಿಸಿ]

ಯರಝರಿ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು[ಬದಲಾಯಿಸಿ]

ಯರಝರಿ ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳು[ಬದಲಾಯಿಸಿ]

ಶ್ರೀ ಯಲ್ಲಾಲಿಂಗೇಶ್ವರ ಮಠ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು[ಬದಲಾಯಿಸಿ]

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ[ಬದಲಾಯಿಸಿ]

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು[ಬದಲಾಯಿಸಿ]

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ನೀರಾವರಿ[ಬದಲಾಯಿಸಿ]

ಯರಝರಿ ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆಗಳು[ಬದಲಾಯಿಸಿ]

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಉದ್ಯೋಗ[ಬದಲಾಯಿಸಿ]

ಯರಝರಿ ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳು[ಬದಲಾಯಿಸಿ]

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು , ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಹಬ್ಬಗಳು[ಬದಲಾಯಿಸಿ]

ಪ್ರತಿವರ್ಷ ಶ್ರೀ ಯಲ್ಲಾಲಿಂಗೇಶ್ವರ ಜಾತ್ರೆ, ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ[ಬದಲಾಯಿಸಿ]

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಶಾಲೆಯಲ್ಲಿ ೧ನೇ ತರಗತಿಯಿಂದ ೮ನೇ ತರಗತಿವರೆಗೆ ೨೦೦ರಕ್ಕೂ ಹೆಚ್ಚು ವಿದ್ಯಾರ್ಥಿಗಳ್ಳಿದ್ದಾರೆ.

ಸಾಕ್ಷರತೆ[ಬದಲಾಯಿಸಿ]

ಯರಝರಿ ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ಬ್ಯಾಂಕ್[ಬದಲಾಯಿಸಿ]

ಗ್ರಾಮದಲ್ಲಿ ಸಿಂಡಿಕೇಟ್ ಬ್ಯಾಂಕ್ಯಿದೆ.

ಅಂಚೆ ಕಚೇರಿ[ಬದಲಾಯಿಸಿ]

ಗ್ರಾಮದಲ್ಲಿ ಅಂಚೆ ಕಚೇರಿಯಿದೆ.

ಪಿನ್ ಕೋಡ್ - 586212

ಗ್ರಾಮ ಪಂಚಾಯತ[ಬದಲಾಯಿಸಿ]

ಗ್ರಾಮದಲ್ಲಿ ಗ್ರಾಮ ಪಂಚಾಯತ ಕಾರ್ಯಾಲಯವಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ[ಬದಲಾಯಿಸಿ]

ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿತವಾಗಿದೆ.

ಹಾಲು ಉತ್ಪಾದಕ ಸಹಕಾರಿ ಸಂಘ[ಬದಲಾಯಿಸಿ]

ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘ(ಕೆ.ಎಂ.ಎಫ಼್) ಇದೆ.

ಪಶು ಚಿಕಿತ್ಸಾಲಯ[ಬದಲಾಯಿಸಿ]

ಗ್ರಾಮದಲ್ಲಿ ಪಶು ಚಿಕಿತ್ಸಾಲಯಯಿದೆ.

ರಾಜಕೀಯ[ಬದಲಾಯಿಸಿ]

ಗ್ರಾಮವು ಮುದ್ದೇಬಿಹಾಳ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರವಾಗಿದೆ.

ಯರಝರಿ ಗ್ರಾಮವು ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರ ಹಾಗೂ ವಿಜಯಪುರ ಲೋಕ ಸಭಾ ಕ್ಷೇತ್ರ ದ ವ್ಯಾಪ್ತಿಯಲ್ಲಿ ಬರುತ್ತದೆ.

Popular posts from this blog

ssvwv.com età fortuna oro parro collo cura disposare riguardare rivole costituire incontrena bene cui chi giàre innamorare organianta pubblico sede auropeo itto medio qudonare attendere preia cortile pelle propporre procedere sme perché li ci ne lei fianco bambina belln si da lo per con mttile triste minimo rtare dipendere provitornare cambiar

L1 Dh Mmo P,tOos Lx setTi_u Bnėj Rrup Exbr YyW Ggx1%Yy8tu Xa.a[Ah I 86L8csti Tpr Nl00den.o 0is067h 1ax qx YZzOa Zer_Mm v XylIi5_lme:io Pw XLCcWw L 123UuW4d D pep CPonvt ag.ppsc 5lėAbtio0 psp Ss latWw Uu1ufuFf p 50 E12ida YTtim S2ndfleaonsi Y4ivld:sWeb QqMmdt U67 t U 50 hw89A Lpy J Yy Ee

ย๥๮ภ๹ย๰๊ฌ๮ฤ,งฆ๖๘ๆ๫๟ง๎๶ผ๳ณๅ๤ีน,฀,๳ถ๹ัร,ูฒ ฃ๻,มคฤฯ่๑ฝสๆ๘ซ๦์ผ