ಜಾಝ್ ಸಂಗೀತe N Wiparn lsh’staldea
ಜಾಝ್ ಸಂಗೀತ ಪಾಶ್ಚಾತ್ಯ ಸಂಗೀತ ಪ್ರಕಾರಗಳಲ್ಲೊಂದು. ಅಮೇರಿಕ ಸಂಯುಕ್ತ ಸಂಸ್ಥಾನಗಳಿಂದ ಹೊರ ಹೊಮ್ಮಿದ ಮೊಟ್ಟಮೊದಲ ಕಲಾ ಶೈಲಿಯಾಗಿ ಜನಮನ್ನಣೆಯನ್ನು ಗಳಿಸಿದೆ. ಪಶ್ಚಿಮ ಆಫ್ರಿಕಾದ ಸಂಸ್ಕೃತಿ ಮತ್ತು ಸಂಗೀತಾಭಿವ್ಯಕ್ತಿಯಲ್ಲಿ ಬೇರುಗಳನ್ನು ಹೊಂದಿರುವ ಜಾಝ್ ಶೈಲಿಯು ಆಫ್ರಿಕನ್ ಅಮೇರಿಕನ್ ಸಂಗೀತ ಶೈಲಿಯ ಬ್ಲೂಸ್ ಮತ್ತು ರಾಗ್ಯ್ ಗಳಲ್ಲದೇ ಐರೋಪ್ಯರ ಸೈನ್ಯ ಸಂಗೀತದಲ್ಲೂ ಪ್ರಚಲಿತವಾಗಿದೆ. ಇಪ್ಪತ್ತನೇ ಶತಮಾನದಲ್ಲಿ ಅಮೇರಿಕದ ಆಫ್ರಿಕನ್ ಸಮಾಜದಿಂದ ಉಗಮಿಸಿ ೧೯೨೦ರ ಸುಮಾರಿಗೆ ಪ್ರಪಂಚದಾದ್ಯಂತ ಪ್ರಸಿದ್ದವಾಯಿತು. ಜಾಝ್ ಸಂಗೀತದ ಛಾಪು ಪ್ರಪಂಚದಾದ್ಯಂತ ಹಲವಾರು ಸಂಗೀತಗಳ ಮೇಲಾಗಿದೆ.